ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಸ್ವಸಂತೋಷಕ್ಕಾಗಿ ಯಕ್ಷಗಾನ : ಕೆ.ಮೋಹನ್

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 17 , 2014
ಯಕ್ಷಗಾನ ರಂಗಭೂಮಿಯಲ್ಲಿ ನಾನು ತೊಡಗಿಕೊಂಡಿದ್ದು ನನ್ನ ಸಂತೋಷಕ್ಕಾಗಿ. ಮನಪೂರ್ವಕವಾಗಿ ಅದರಲ್ಲಿ ತೊಡಾಗಿಸಿಕೊಂಡಿದ್ದೇನೆ. ಇದನ್ನು ನಾನು ಕಲಾ ಸೇವೆಯೆಂದು ಭ್ರ್ರಮಿಸುವುದಿಲ್ಲ ಎಂದು ಯಕ್ಷದೇಗುಲದ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ. ಮೋಹನ್ ನುಡಿದರು.

ಕೆ.ಹೆಚ್. ಕಲಾಸೌಧದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ನಯನ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕಲಾಕದಂಬ ಉತ್ಸವ ಸಂಧರ್ಭದಲ್ಲಿ ಯಕ್ಷರಂಗ ಗೌರವ ಸ್ವೀಕರಿಸಿ ಮಾತನಾಡಿದ ಅವರು ಹಣದ ಬೆನ್ನು ಹತ್ತಿ ಹೋಗುವುದಕ್ಕಿಂತ ಯಾವುದೇ ಕ್ಷೇತ್ರದಲ್ಲಿದ್ದರೂ ಆ ಕೆಲಸಕ್ಕೆ ಬದ್ಧರಾಗಿ ದುಡಿದರೆ ಹಣ ತಾನಾಗೆ ಬರುತ್ತದೆ ಎಂದು ತಿಳಿಸಿದರು.

ಸುಧೀ೦ದ್ರ ಹೊಳ್ಳರವರಿಗೆ ಸನ್ಮಾನ
ಯಕ್ಷರಂಗ ಗೌರವ ಪಡೆದ ಇನ್ನೊಬ್ಬ ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಸುಧೀಂದ್ರ ಹೊಳ್ಳ ಅವರು ಮಾತನಾಡಿ ‘ತಾಯಿಯ ಹಾರೈಕೆ ಮಕ್ಕಳನ್ನು ರೂಪಿಸುವಲ್ಲಿ ಪ್ರಮುಖವಾಗುತ್ತದೆ. ಸನ್ಮಾನ ಪಡೆಯುವ ಪೂರ್ವದಲ್ಲಿ ಅವಮಾನಗಳು ಆಗುವುದು ಅನಿವಾರ್ಯ. ನಮ್ಮೊಳಗಿನ ಕಲಾವಿದನನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುವವರು ಬೇಕು. ನಮ್ಮ ವೇದಿಕೆಯನ್ನು ನಾವೇ ಸೃಷ್ಠಿ ಮಾಡಿಕೊಳ್ಳಬೇಕು ಎನ್ನುವ ಹಿರಿಯರ ಮಾರ್ಗದರ್ಶನದಿಂದ ನಾನು ಗುರಿ ತಲುಪುವುದಕ್ಕೆ ಸಾಧ್ಯವಾಯ್ತು ಎಂದರು.

ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಸ್ವೀಕರಿಸುತ್ತದೆ. ಸಾಧನೆ ಶ್ರಮ ಶಕ್ತಿ ಕಲಾವಿದನಲ್ಲಿದ್ದಾಗ ಮಾತ್ರ ಬೆಳೆಯುವುದಕ್ಕೆ ಸಾಧ್ಯ. ಅಂತಹ ನಿಷ್ಠೆಯಿಂದ ತಂಡ ಕಟ್ಟಿದ ರಾಧಾಕೃಷ್ಣ ಉರಾಳ ಮತ್ತು ಸಮಾನ ಮನಸ್ಕರ ಕಲಾಕದಂಬ ಸಂಸ್ಥೆ ಇನ್ನಷ್ಟು ಗಣನೀಯ ಕೆಲಸವನ್ನು ಮಾಡಲಿ ಕರ್ನಾಟಕ ಕಲಾತಿಲಕ ಡಾ ಸರ್ವೋತ್ತಮ ಕಾಮತ್ ಎಂದು ಹಾರೈಸಿದರು. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಡಾ ನಟರಾಜ್ ಕರಬ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಲಾಕದಂಬ ಸಂಸ್ಥೆಯ ಅಧ್ಯಕ್ಷರಾದ ಅಂಬರೀಷ್ ಭಟ್ ಸಂಸ್ಥೆಯ ಈವರೆಗಿನ ಸಾಧನೆಗಳೊಂದಿಗೆ ಕಲಾಕದಂಬ ಉತ್ಸವ ಹಾಗೂ ಆಗಸ್ಟ್ ೧೭ ರಂದು ಸಂಜೆ ೪ಕ್ಕೆ ಹನುಮಂತನಗರದ ಕೆ.ಹೆಚ್. ಕಲಾಸೌಧದಲ್ಲಿ ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಅವರಿಗೆ “ಕಾಳಿಂಗ ನಾವಡ ಪ್ರಶಸ್ತಿ-ಪ್ರದಾನ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುರಳೀಧರ ನಾವಡ ಮತ್ತು ಸಂಗಡಿಗರೊಂದಿಗೆ ಹಾಡಿದ ರಂಗ ಮತ್ತು ದೇಶಭಕ್ತಿ ಗೀತೆ ರಂಗ ಮಂಟಪ ಪ್ರದರ್ಶಿಸಿದ ಚಂಪಾ ಪಿ.ಶೆಟ್ಟಿ ನಿರ್ದೇಶನದ “ಗಾಂಧಿ ಬಂದ” ನಾಟಕ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಮಯೋಚಿತವಾಗಿದ್ದು ಕಲಾಕದಂಬ ಉತ್ಸವವನ್ನು ಅರ್ಥಪೂರ್ಣವಾಗಿಸಿತ್ತು.

ವಿಶ್ವನಾಥ ಉರಾಳ್, ಕರಬ ಪ್ರತಿಷ್ಥಾನದ ದೇವರಾಜ ಕರಬ ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಿತ್ತರು.

******************

”ಗಾ೦ಧಿ ಬ೦ದ“ ನಾಟಕ





ಕೆ.ಮೋಹನ್ ರವರಿಗೆ ಸನ್ಮಾನ




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ